Followers

Sunday, May 19, 2019

ನನ್ನ ಮನದಾಳದಿಂದ ಮೂಡಿದ ವೇದನೆಯ ಹಾಡು


ನಾ ಹೆಣವಾಗುವ ಮುನ್ನ
ನನ್ನ ಮನದಾಳದಿಂದ ಮೂಡಿದ ವೇದನೆಯ ಹಾಡು 


ಪಾಪವ ಮಾಡಿದ ಮನುಜನು ನಾನು ಮನ್ನಿಸೋ ದೇವಾ //
//ನನ್ನ // ಮನ್ನಿಸೋ ದೇವ . ನಿ...ನನ್ನ ಮನ್ನಿಸೋ ದೇವಾ //ಪ//
ಯಾವ ಜನ್ಮದ ಪಾಪದ ಪಲವೋ....../2/ ಅ...ನಾಥ..ನಾದೆ ನಾನ
ಈ ಜನುಮದಿ ದಿಕ್ಕಿಲ್ಲದವನಾದೆ ನಾನ
//ಪಾಪವ ಮಾಡಿದ ಮನುಜನು//
ಅಮ್ಮನ ಮಡಿಲಲ್ಲಿ ಮಗುವಾಗೋ ಆಸೆ / ಅಮ್ಮನ ಕೊನೆತುತ್ತ ತಿಂದು ಸಾಯೋ ಆಸೆ
/ಕರುಣಿಸೋ ದೇವಾ/
ನನ್ನ ಕರುಣಿಸೋ ದೇವಾ // ನಿ ನನ್ನ ಕರುಣಿಸೋ ದೇವ        
//ಪಾಪವ ಮಾಡಿದ ಮನುಜನು//
ಅಪ್ಪನ ಭುಜಕೆ ಭುಜವಾಗೋ ಆಸೆ / ಅಪ್ಪನ ಅಪ್ಪಿಕೊಂಡು ಬದುಕೊವಾಸೆ
/ಅಪ್ಪನಾಗೋ ದೇವಾ/
ನನ್ನ ಅಪ್ಪನಾಗೋ ದೇವ // ನಿ ನನ್ನ ಅಪ್ಪನಾಗೋ ದೇವ
//ಪಾಪವ ಮಾಡಿದ ಮನುಜನು//
ಮುದ್ದಿನ ತಂಗಿಗೆ ಅಣ್ಣನಾಗೋ ಆಸೆ  / ನಲ್ಮೆಯ ತಮ್ಮನ ಬಲವಾಗೋ ಆಸೆ
/ಕರುಣಿಸೋ ದೇವಾ/
ನನ್ನ ಕರುಣಿಸೋ ದೇವಾ // ನಿ ನನ್ನ ಕರುಣಿಸೋ ದೇವ
//ಪಾಪವ ಮಾಡಿದ ಮನುಜನು//
ಮಡದಿಯ ಪ್ರೀತಿಯಲ್ಲಿ ತೆಲಾಡೋ ಆಸೆ // ಮಕ್ಕಳ ಜೊತೆಗೂಡಿ ಆಟವಾಡೋ ಆಸೆ
/ಕರುಣಿಸೋ ದೇವಾ/
ನನ್ನ ಕರುಣಿಸೋ ದೇವಾ // ನಿ ನನ್ನ ಕರುಣಿಸೋ ದೇವ
//ಪಾಪವ ಮಾಡಿದ ಮನುಜನು//

ರಾ ದೇ ಕಾರಭಾರಿ

Thursday, May 9, 2019

ನಿ ಬದಕಾಕ ಬಿಡವಲ್ಲಿ ಯಾಕ


ಮಾಡಿದಿಯಲ್ಲೇ ನನಗ ಮೋಸಾ...
ಹಾಕಿದಿಯಲ್ಲೇ ಯಮನ ಪಾಷಾ.. /ಪ/
ನಗಲಾಕ ಬಿಡವಲ್ಲಿ ನನ್ನ...
ನಿ ಬದಕಾಕ ಬಿಡವಲ್ಲಿ ಯಾಕ... /2/

ಕಣ್ಣಿನ ನೋಟಕ್ಕ ಮಳ್ಳಾದೆ ನಾನ... ಸುಳ್ಳಾಯ್ತು ಈ ಪ್ರೀತಿ ಬದುಕ //
ಬದುಕಿನ ತುಂಬಾ ನಿನಿರಬೇಕಂತ / ಕಟಕೊಂಡ ಆ ಸುಳ್ಳ ಕನಸ /
ಕಟಕೊಂಡ ಆ ಸುಳ್ಳ ಕನಸ / ನಾ / ಕಟಕೊಂಡ ಆ ಸುಳ್ಳ ಕನಸ

ಮಾಡಿದಿಯಲ್ಲೇ ನನಗ ಮೋಸಾ...
ಹಾಕಿದಿಯಲ್ಲೇ ಯಮನ ಪಾಷಾ.. /ಪ/
ನಗಲಾಕ ಬಿಡವಲ್ಲಿ ನನ್ನ...
ನಿ ಬದಕಾಕ ಬಿಡವಲ್ಲಿ ಯಾಕ... /2/

ಮನಸಿನ ತುಂಬಾ  ನಿನ್ನದೇ ಚಿತ್ತಾರ... ಬಿಡಿಸಿದ್ದೆ ಒಂದು ಘಳಿಗ್ಯಾಗ
 ಬಿಡಿಸಿದ ರಂಗೋಲಿ ಅಳಸಿ ಹೋದಂಗ / ಹೊದ್ಯಲ್ಲ ಈ ಜೀವದಿಂದ /
ಹೊದ್ಯಲ್ಲ ಈ ಜೀವದಿಂದ / ನಿ / ಹೊದ್ಯಲ್ಲ ಈ ಜೀವದಿಂದ

ಇಂತಿ ನಿಮ್ಮ ಪ್ರೀತಿಯ
ರಾದೇ....ಕಾರಭಾರಿ

ಅವಳಿಗಾಗಿ ಒಂದು ಹಾಡು, ಮನದಾಳದಿಂದ ಬರೆದದ್ದು

ಸುನಾ ಸುನಾ ದಿಲ್.


(ಅವಳ ಅಂದವ ನೋಡಿ ಹೆಳಿತು ಈ ಮನಸು)

ಸುನಾ ಸುನಾ ಲಗತಾ ಮುಜೆ
ನಿನು ಇಲ್ಲದೆ
ಸೊನಾ ಚಾಂದಿ ಎನೂ ಬ್ಯಾಡ ನಿನೊಬ್ಬಳೆ ಸಾಕೆ.

(ಆ ದಿನ ಅವಳ ಕಂಗಳ ನೊಡಿ ನನಗೆ ಹಾರ್ಟ ಅಟ್ಯಾಕ ಆದ ಅನುಭವ ಕಣ್ರಿ)

ನಿನ್ನ ಕಣ್ಣ ನೋಡಿ ಆಯ್ತು ಯನಗೆ ಹಾರ್ಟು ಅಟ್ಯಾಕು.
ಮೆರೆ ಸಪನೆಮೆ ಆಜಾ ಚೊರಿ ಬ್ಯಾಡ ದಿಮಾಕು

(ಅವಳ ಬಳಕುವ ಸೊಂಟ ನೊಡಿ ನವಿಲ ನಾಟ್ಯ ನೋಡಿದ ಹಾಗಾಯ್ತು)

ನಿನ್ನ ಬಳಕುವ ಸೊಂಟ ನೊಡಿ ಎದೆ ಹೊಡದ್ಹೊಯ್ತು
ಮೆರೆ ದಿಲ ತೊ ಅಬ ಪಾಗಲ ಹುವಾ ನಿನ್ನ ಪಡೆಯಲು

(ಅಬ್ಬಾ ಆ ಸೂರ್ಯನಿಗೆ ಸಾಟಿ ಯಾರೂ ಇಲ್ಲ ಅನ್ಕೊಂಡಿದ್ದೆ ಆದರೆ ಸೂರ್ಯನೊಗೆ ಟಾರ್ಚು ಹಿಡಿಯಿತು ಅವಳ ಕಂಗಳು)

ಆ ಸೂರ್ಯನಿಗೂ ಟಾರ್ಚು ಹಿಡಿತು ನಿನ್ನ ಕಂಗಳು
ತೆರೆ ಆಂಕೊಂಕೊ ಫಿದಾ ಹುವಾ ನನ್ನಯ ಮನಸು

ನಿನ್ನ ಪ್ರೀತಿಯ
ರಾದೇ....ಕಾರಭಾರಿ 

Tuesday, May 7, 2019

ಹೇ ಮನಸೆ ನಿನ್ಯಾಕೆ ಹಿಗೆ

ಹೇ ಮನಸೆ ನಿನ್ಯಾಕೆ ಹಿಗೆ 

ಹೇ ಮನಸೇ ನೀನು ಯಾಕೆ ಹೀಗೆ
ಅವಳು ಚಂದದ ಗೊಂಬೆ ಅಂದದ ಗೊಂಬೆ ಕರ್ಪೂರದ ಗೊಂಬೆ ಅನ್ನೊದೆಲ್ಲ ನಿಜ
ಅವಳು ತಿಲೋತ್ತಮೆಗಿಂತಲೂ ಸ್ವಲ್ಪ ಹೆಚ್ಚು ಸುಂದರಿ ಅನ್ನೋದೂ ನಿಜ
ಆದರೆ ಅವಳು ನಿನಗಾಗಿ ಉಂಟಾದವಳಲ್ಲ.
ಅವಳಿಗೂ ನನಗೂ ತುಂಬಾ ವ್ಯತ್ಯಾಸವಿದೆ
ಅವಳು ಆಕಾಶದಲ್ಲಿ ಮಿನುಗುವ ನಕ್ಷತ್ರ
ನೀನು ಈ ಭೂಮಿ ಮೆಲಿನ ಕಸ ಅದಕ್ಕಾಗಿ ಮನಸೇ ಸುಮ್ನೆ ಸೈಲೆಂಟಾಗಿಬಿಡು
ನಿ ಅವಳಿಗೆ ಯೊಗ್ಯನಲ್ಲ

ನಿಮ್ಮ ಪ್ರೀತಿಯ
ರಾದೇ....ಕಾರಭಾರಿ 

ಮಡಿಲಲ್ಲಿ ಮಲಗಿ ನನ್ನವಳಾಗ್ತಿಯಾ ಅನ್ಕೊಂಡಿದ್ದೆ, ಆದ್ರೆ ನನ್ನೆದೆಯ ಒಡಲಲ್ಲಿ ನೆನಪಾಗಿ ಉಳಿದೆ



ಜೀವನದಲ್ಲಿ ಮೂಡುವ ಕೆಲವೊಂದು ಪ್ರಶ್ನೆಗಳಿಗೆ ಉತ್ತರವಿಲ್ಲ
ಆದರೆ ಅದ್ಯಾಕೋ ಗೊತ್ತಿಲ್ಲ ಮನಸ್ಸು ಕೆಳ್ತಾನೇ ಇಲ್ಲ
ಏನೋ ಅನ್ಕೊಂಡಿದ್ದೆ ಮತ್ತೇನು ಆಗೋಯ್ತು

ನನ್ನ ಮಡಿಲಲ್ಲಿ ಮಲಗಿ ನನ್ನವಳು ಆಗ್ತೀಯ ಅನ್ಕೊಂಡಿದ್ದೆ
ಆದರೆ ನನ್ನೆದೆಯಾ ಒಡಲಲ್ಲಿ ನೆಲೆಸಿ ನೆನಪಾಗಿ ಉಳಿದೆ

ನೆನಪುಗಳನ್ನು ನನ್ನ ಎದೆಯಾಳದಿಂದ ಅಳಿಸಿಹಾಕಬೇಕು ಅಂದುಕೊಂಡಿದ್ದೇನೆ ಆದ್ರೆ ಅಗೆದಷ್ಟು ಹೊರಬರ್ತಾಯಿದೆ
ಎನ್ಮಾಡ್ಲಿ?

ನಿಮ್ಮ ಪ್ರೀತಿಯ
ರಾದೇ.....ಕಾರಭಾರಿ 

ಆ ಕಣ್ಣ ಹೊಳಪ ನೋಡದಾದೆನಿಂದು

ಆ ಕಣ್ಣ ಹೊಳಪ ನೋಡದಾದೆನಿಂದು
 ಅವಳ ಕಂಗಳ ಹೊಳಪು  ನೋಡಲಾಗಲಿಲ್ಲ 
ಮತ್ತೇ ಎಲ್ಲಿ ಬಿದ್ದುಹೊಗ್ತಿನಿ ಅನ್ನೋ ಭಯ 

ಅವಳೊಂದಿಗೆ ಮಾತನಾಡಲಾಗಲಿಲ್ಲ 
ಮಾತನಾಡುವಾಗ ಎಲ್ಲಿಯಾದರೂ ತೊದಲಿಬಿಡ್ತಿನೋ ಅನ್ನೋ ಆತಂಕ 

ಸುಂದರ ಕಣ್ಣು, ತಿಕ್ಷ್ಣ ನೋಟ 
ವೈಯಾರದ ನಡಿಗೆ, ಬಿಂಕದ ಸಿಂಗಾರ 
ಇವೆಲ್ಲವನ್ನೂ ನೋಡಿದ ಮೇಲೆ 
ಆ ಬ್ರಹ್ಮ ತುಂಬಾ ಪುರುಸೋತ್ತಿನಿಂದ ಕೆತ್ತಿದ ಕೆತ್ತನೆ ಅವಳದ್ದು 

ಆದರೇನು ಮಾಡಲಿ ನನ್ನ ಮನಸು ಅವಳನ್ನು ರಿಜೆಕ್ಟ್ ಮಾಡಿತು
ಆದರೆ ಹೃದಯ ಬಡಬಡಿಸುತ್ತಿದೆ 
ಮನಸ್ಸು ಕಲ್ಲಾಗಿಬಿಟ್ಟಿದೆ 
ಗುಡಿಯಲ್ಲಿ ಕುಳಿತ ಆ ಕಲ್ಲು ದೇವರಂತೆ 

ಇಂತಿ ನಿಮ್ಮ ಪ್ರೀತಿಯ 
ರಾದೇ.....ಕಾರಭಾರಿ


ಮನಸೇ ಕಾರಣವ ಹೇಳು

ಮನಸೇ ಕಾರಣವ ಹೇಳು


ಮನಸು ಕೇಳ್ತಾ ಇದೆ
ಅವಳು ಯಾಕೆ ಬೇಡವಾದ್ಲು
ಮನಸ್ಸಿಗೆಕೋ ತಳಮಳ
ಅವಳ ನೋಡಿದ ದಿನದಿಂದ ಮುದಗೊಂಡ ಮನಸ್ಸು ಯಾಕೆ ಹೀಗಾಯ್ತು
ಒಂದೇ ಒಂದು ವಿಷಯಕ್ಕಾಗಿ ಪ್ರೀತಿಸಿದ ಹುಡುಗಿ ಬೇಡವಾದಳಾ
ಫುಲ್ಲ್ ಕನ್ಫ್ಯೂಷನ್
ಪ್ರೀತಿ ಪ್ರೇಮ ಪ್ರಣಯ
ಮನಸ್ಸು ಹೃದಯ
ಇದು ಯಾವುದು ನನಗೆ ಇಲ್ಲ ಅನ್ಸುತ್ತೆ
ಭಹುಷ್ಯ ನಾ ಪ್ರೀತಿ ಮಾಡಲಿಕ್ಕೆ ಲಾಯಕ್ಕಿಲ್ಲ
ಪ್ರೀತಿಸಿದ ಹುಡುಗಿನ ಕಾರಣವಿಲ್ಲದೆ ತ್ಯಜಿಸೊದಂದ್ರೆ ಅದು ಕಠೋರ ಮನದವರಿಗೆ ಮಾತ್ರ ಸಾದ್ಯ.
ನಾ ಅಷ್ಟು ಕಠೋರನಾ
ಇದು ಉತ್ತರವಿಲ್ಲದ ಪ್ರಶ್ನೆ.

ಅವಳನ್ನ ನೋಡಿದ ಆ ದಿನವೇ ಮನಸು ಹೇಳ್ ಬಿಡ್ತು ಇವಳೇ ಫಿಕ್ಸ್
ಬಟ್ ಒಂದೇ ಒಂದು ದಿನದಲ್ಲಿ ಮತ್ತೆ ಮನಸ್ಸು ಹೇಳುತ್ತಿದೆ ಇವಳು ಬೇಡ
ಏನಾಗಿದೆ ನನಗೆ ?
ಗೊತ್ತಿಲ್ಲ ಆದರೆ ಮನಸ್ಸು ಮಾನಸ್ಸು ಮಾತ್ರ ಅಳ್ತಾ ಇದೆ ತುಂಬಾ ಅಳ್ತಾ ಇದೆ

ಅವಳು ಬೇಡ ಅಂತ ಹೇಳಿದೆ ಮನಸ್ಸು
ಆದರೆ ಯಾಕೆ ಅನ್ನೋ ಪ್ರಶ್ನೆಗೆ ಉತ್ತರವಿಲ್ಲ
ಬಟ್ ಅವಳನ್ನ ನೆನೆಸಿಕೊಂಡಾಗೆಲ್ಲ ಮನಸ್ಸು ಅಳುತ್ತಿದೆ
ಏನು ಗೊತ್ತಿಲ್ಲ
ಆದ್ರೆ ಈ ಹಾಳಾದ ಮನಸ್ಸಿಗೆ ಅಳೊದೊಂದೆ ಗೊತ್ತು

ಇಂತಿ ನಿನ್ನ ಪ್ರೀತಿಯ
ರಾದೇ....ಕಾರಭಾರಿ