Followers

Sunday, May 5, 2019

ಬದಲಾದ ಭಾವನೆಗಳು

ಅದೆಷ್ಟು ವಿಚಿತ್ರವಲ್ಲವೇ?
ಇಂತಹ ಪರಿಸ್ಥಿತಿ ಬಂದಾಗ ಮನಸು ವಿಲಿ ವಿಲಿ ಒದ್ದಾಡಿಬಿಡುತ್ತದೆ.
ನೂರೊಂದು ನೆನಪು ಎದೆಯಾಳದಿಂದ ಹಾಡಾಗಿಬಂತು ಆನಂದದಿಂದ ಅನ್ನೋ ಪದದ ಸಂಪೂರ್ಣ ರಿವರ್ಸ್  ಈ ಕಲ್ಪನೆಯ  ಸಾಲುಗಳು.
ಪರಮದಯಾಳು ಪರಮದಯಾಮಯ ಸರ್ವಸೃಷ್ಟಿಕರ್ತ ಎಂದೆಲ್ಲ ಕರೆಯಿಸಿಕೊಳ್ಳುವ ಅವನು ಎಲ್ಲರ  ಜೀವನದಲ್ಲಿ ತುಂಬಾ ಆಟವಾಡಿಬಿಡ್ತಾನೆ. 
ಅವನ ಆಟವೆಲ್ಲ  ಮುಗಿದ ಮೇಲೆ ಹೊಸ ಬದುಕ ಹುಡುಕುತ್ತ ಹೊರಟ  ಜೀವನದ ಪಯಣ ಹೇಗೆಲ್ಲ ತಿರುವು ಮುರುವು ಪಡೆಯುತ್ತದೆ ಅನ್ನೋ ನಿದರ್ಷನವೇ ಈ ಸಾಲುಗಳು

ಒಂದು ಹಕ್ಕಿ ಒಂಟಿಯಾಗಿ ತುಂಬಾ ಸುಂದರವಾಗಿ ಆಕಾಶದಲ್ಲಿ ಹಾರಾಡ್ತಾ ಇತ್ತು ಅದನ್ನು ನೋಡಿದ ಮತ್ತೊಂದು ಹಕ್ಕಿ ಅದರ ಜೊತೆಗೂಡಿ ಹತ್ತಿರವಾಯಿತು.
ಭಾವನೆಗಳು ಕನಸುಗಳು ಮೂಡತೊಡಗಿದವು ಪರಮದಯಾಳು ಕಿತ್ತುಕೊಂಡ ನಗುವನ್ನು ಆ ಹಕ್ಕಿ ಕೊಡಬಹುದೋ ಅನ್ನೋ ದೂರದ ಆಸೆ ಒಂಟಿ ಹಕ್ಕಿಯ ಮನದಲ್ಲಿ ಮನೆಮಾಡಿತು 
ಜೊತೆಯಾಗಿ ಹಾರಾಡತೊಡಗಿದ ಹಕ್ಕಿಗಳು ತುಂಬಾ ಅನ್ಯೂನ್ಯವಾದವು
ಇನ್ನೆನ್ನು ಒಂಟಿ ಹಕ್ಕಿ ಜೋತೆಸಿಕ್ಕ ಹಕ್ಕಿಯೊಂದಿಗೆ ಮಾತಾಡುವ ಮೊದಲೇ ಮರೆಯಾಗಿದ್ದ ಅದರ ಜೊತೆಗಾರ ಹಕ್ಕಿಯ ಸಪ್ಪಳ ಕೇಳಿಸಿತು. 
ಒಂಟಿ ಹಕ್ಕಿ ಅಂದುಕೊಂಡಿತು ಅಯ್ಯೋ ಹುಚ್ಚು ಮನಸೆ ನಿನ್ಯಾಕೆ ಹೀಗೆ....
ಮರೆಹಕ್ಕಿಯನ್ನ ನೋಡಿದ ಜೋತೆಹಕ್ಕಿ ಒಂಟಿ ಹಕ್ಕಿಯತ್ತ ತಿರುಗಿ ನಕ್ಕು ಹೇಳಿತು ನೋಡು ನನ್ನ ಜೀವ ಬಂತು..
ಒಂಟಿ ಹಕ್ಕಿ ಜೋತೆಹಕ್ಕಿಯ ಸಂತೋಷ ನೋಡಿ ಉಧ್ಗರಿಸಿತು ಓ ದೇವರೇ ಯಾವತ್ತೂ ಇವರನ್ನ ಸಂತೋಷವಾಗಿಡು 
ಜೋತೆಹಕ್ಕಿ ಮತ್ತು ಮರೆಹಕ್ಕಿಯನ್ನ ಒಟ್ಟಾಗಿ ನೋಡಿ ಸಂತೋಷಗೊಂಡ ಒಂಟಿಹಕ್ಕಿ ತನ್ನ ಭಾವನೆಗಳನ್ನು ಬದಲಾಯಿಸಿಕೊಂಡಿತು ಮತ್ತು ಅವುಗಳನ್ನು ನೋಡಿ ಖುಷಿಪಟ್ಟಿತು
ಯಾವತ್ತೂ ಹೀಗಯೇ ಚನ್ನಾಗಿರಿ ಅಂತ ಹೇಳಿ ದೂರದಲ್ಲಿ ಮತ್ತೆ ಒಂಟಿಯಾಗಿ ನಿಂತುಬಿಟ್ಟಿತು

ಕೊನೆಗೂ ಒಂಟಿ ಹಕ್ಕಿಗೆ ಕಾಡುವ ಕಟ್ಟ ಕಡೆಯ ಪ್ರಶ್ನೆ?
ನಾನೇಕೆ ಒಂಟಿ............

ಇಂತಿ ನಿಮ್ಮ ಪ್ರೀತಿಯ
ರಾದೇ.....ಕಾರಭಾರಿ

No comments:

Post a Comment