"ತಿಳಿಗೇಡಿ ಬದುಕು" ಜೀವನ ಅಂದ್ರೆ ಚಿಂದಿ ಚಿತ್ರನ್ನಾ
ಬದುಕು ದೊಂಬರಾಟ ಕಣ್ರೀ
ಬದುಕನ್ನು ಎಷ್ಟೇ ನಾಜೂಕಾಗಿ ಸವೆಸಿದರೂ ಎಲ್ಲೋ ಒಂದು ಕಡೆ ಯಡವಿ ಬಿಡ್ತೇವೆ.
ಒಂದು ಹಳ್ಳಿಯಲ್ಲಿ ಒಬ್ಬ ಗೌಡ ಒಂದು ಬಡ ಮಹಿಳೆಗೆ ಉಟ್ಟುಕೊಳ್ಳಲು ಒಂದು ರೇಷ್ಮೆ ಸೀರೆ ಕೊಟ್ಟಿದ್ದನಂತೆ
ಉಪಯೋಗಿಸಿ ಯತಾಸ್ಥಿತಿ ವಾಪಸ್ ತಂದುಕೊಡು ಅಂತ ಕರಾರು ಮಾಡಿದ್ದ
ಮನೆಗೆ ಬಂದ ಮಹಿಳೆ ರೇಷ್ಮೆ ಸೀರೆಯನ್ನು ಉಟ್ಟುಕೊಂಡು ಬಾಗಿಲ ಬಳಿ ನಿಂತಿದ್ದಳು ಆಗ ಮತ್ತೊಬ್ಬಳು ಬಂದು ಹತ್ತಿ ಬಿಡಿಸಲು ಹೊಲಕ್ಕೆ ಹೋಗೋಣು ಬಾ ಅಂತ ಕರೆದ ಕೂಡಲೇ ಅವಳು ಅದೇ ಸೀರೆಯನ್ನು ಉಟ್ಟು ಹೋಗಿಬಿಟ್ಟಳು ಹತ್ತಿ ಬಿಡಿಸುತ್ತ ಬಿಡಿಸುತ್ತ ಉಟ್ಟ ರೇಷ್ಮೆ ಸೀರೆ ಹತ್ತಿ ಮುಳ್ಳಿಗೆ ಸಿಕ್ಕಿ ಚಿಂದಿ ಚಿಂದಿಯಾಯ್ತು.
ಹತ್ತಿಬಿಡಿಸಿದ ಮೇಲೆ ನೋಡ್ತಾಳೆ ಸೀರೆ ಚಿಂದಿಯಾಗಿದೆ.
ನಮ್ಮ ಬದುಕು ಸಹ ಹಾಗೆಯೇ ಆಲ್ವಾ ರೇಷ್ಮೆ ಸೀರೆ ಚಿಂದಿಯಾದ ಹಾಗೆ ಬದುಕು ಚಿಂದಿಯಾಗಿ ಬಿಡುತ್ತದೆ
ಮಹಿಳೆಗೆ ರೇಷ್ಮೆ ಸೀರೆ ಕೊಟ್ಟ ಆ ಗೌಡ ಒಂದು ದಿನ ಇವಳನ್ನು ಕರೆದು ರೇಷ್ಮೆ ಸೀರೆ ವಾಪಸ್ಸು ಕೊಡು ಅಂತ ಕೇಳ್ತಾನೆ ಆದರೆ ರೇಷ್ಮೆ ಸೀರೆ ಚಿಂದಿಯಾಗಿದೆ
ಅವಳು ತಲೆ ತಗ್ಗಿಸಿ ನಿಲ್ತಾಳೆ ಗೌಡ ಹೇಳ್ತಾನೆ ಈ ಸೀರೆ ಚನ್ನಾಗಿ ಉಪಯೋಗಿಸಿದ್ದರೆ ನಿನಗೆ ಇನ್ನೊಂದು ಇದಕ್ಕಿಂತ ಉತ್ತಮ ಸೀರೆ ಕೊಡುತ್ತಾ ಇದ್ದೆ ನಿ ಯೋಗ್ಯವಿಲ್ಲದವಳು ನನ್ನ ಕಣ್ಣ ಮುಂದೆ ಕಾಣದೆ ದೂರ ಹೋಗಿಬಿಡು.
ಹಾಗೆಯೇ ಆಲ್ವಾ
ದೇವರು ಕೊಟ್ಟ ಈ ಪವಿತ್ರ ಮನುಷ್ಯ ಜನ್ಮವನ್ನು ನಾವು ಹತ್ತಿ ಬಿಡಿಸಲು ಹೋದ ಮಹಿಳೆಯಂತೆ ಮಾಡಿಕೊಳ್ಳುತ್ತೇವೆ
ಜೀವನದ ತುಂಬಾ ಮುಳ್ಳೇ ಮುಳ್ಳು ಕೊನೆಗೂ ಜೀವನ ಚಿಂದಿ ಚಿತ್ರನ್ನಾ
ಈ ಜೀವನ ಕೊಟ್ಟ ಆ ದೇವರು ಇದನ್ನು ವಾಪಸ್ಸು ಕೇಳಿ ನಮ್ಮ ಲೆಕ್ಕ ಕೇಳಿದಾಗ ತಲೆ ತಗ್ಗಿಸುವುದು ಬಿಟ್ಟರೆ ನಾವು ಇನ್ನೇನು ಮಾಡಲು ಸಾದ್ಯ
ನಿಮ್ಮಪ್ರೀತಿಯ
ರಾದೇ....ಕಾರಭಾರಿ

No comments:
Post a Comment