Followers

Tuesday, May 7, 2019

ಆ ಕಣ್ಣ ಹೊಳಪ ನೋಡದಾದೆನಿಂದು

ಆ ಕಣ್ಣ ಹೊಳಪ ನೋಡದಾದೆನಿಂದು
 ಅವಳ ಕಂಗಳ ಹೊಳಪು  ನೋಡಲಾಗಲಿಲ್ಲ 
ಮತ್ತೇ ಎಲ್ಲಿ ಬಿದ್ದುಹೊಗ್ತಿನಿ ಅನ್ನೋ ಭಯ 

ಅವಳೊಂದಿಗೆ ಮಾತನಾಡಲಾಗಲಿಲ್ಲ 
ಮಾತನಾಡುವಾಗ ಎಲ್ಲಿಯಾದರೂ ತೊದಲಿಬಿಡ್ತಿನೋ ಅನ್ನೋ ಆತಂಕ 

ಸುಂದರ ಕಣ್ಣು, ತಿಕ್ಷ್ಣ ನೋಟ 
ವೈಯಾರದ ನಡಿಗೆ, ಬಿಂಕದ ಸಿಂಗಾರ 
ಇವೆಲ್ಲವನ್ನೂ ನೋಡಿದ ಮೇಲೆ 
ಆ ಬ್ರಹ್ಮ ತುಂಬಾ ಪುರುಸೋತ್ತಿನಿಂದ ಕೆತ್ತಿದ ಕೆತ್ತನೆ ಅವಳದ್ದು 

ಆದರೇನು ಮಾಡಲಿ ನನ್ನ ಮನಸು ಅವಳನ್ನು ರಿಜೆಕ್ಟ್ ಮಾಡಿತು
ಆದರೆ ಹೃದಯ ಬಡಬಡಿಸುತ್ತಿದೆ 
ಮನಸ್ಸು ಕಲ್ಲಾಗಿಬಿಟ್ಟಿದೆ 
ಗುಡಿಯಲ್ಲಿ ಕುಳಿತ ಆ ಕಲ್ಲು ದೇವರಂತೆ 

ಇಂತಿ ನಿಮ್ಮ ಪ್ರೀತಿಯ 
ರಾದೇ.....ಕಾರಭಾರಿ


No comments:

Post a Comment