ಹಾಕಿದಿಯಲ್ಲೇ ಯಮನ ಪಾಷಾ.. /ಪ/
ನಗಲಾಕ ಬಿಡವಲ್ಲಿ ನನ್ನ...
ನಿ ಬದಕಾಕ ಬಿಡವಲ್ಲಿ ಯಾಕ... /2/
ಕಣ್ಣಿನ ನೋಟಕ್ಕ ಮಳ್ಳಾದೆ ನಾನ... ಸುಳ್ಳಾಯ್ತು ಈ ಪ್ರೀತಿ ಬದುಕ //
ಬದುಕಿನ ತುಂಬಾ ನಿನಿರಬೇಕಂತ / ಕಟಕೊಂಡ ಆ ಸುಳ್ಳ ಕನಸ /
ಕಟಕೊಂಡ ಆ ಸುಳ್ಳ ಕನಸ / ನಾ / ಕಟಕೊಂಡ ಆ ಸುಳ್ಳ ಕನಸ
ಮಾಡಿದಿಯಲ್ಲೇ ನನಗ ಮೋಸಾ...
ಹಾಕಿದಿಯಲ್ಲೇ ಯಮನ ಪಾಷಾ.. /ಪ/
ನಗಲಾಕ ಬಿಡವಲ್ಲಿ ನನ್ನ...
ನಿ ಬದಕಾಕ ಬಿಡವಲ್ಲಿ ಯಾಕ... /2/
ಮನಸಿನ ತುಂಬಾ ನಿನ್ನದೇ ಚಿತ್ತಾರ... ಬಿಡಿಸಿದ್ದೆ ಒಂದು ಘಳಿಗ್ಯಾಗ
ಬಿಡಿಸಿದ ರಂಗೋಲಿ ಅಳಸಿ ಹೋದಂಗ / ಹೊದ್ಯಲ್ಲ ಈ ಜೀವದಿಂದ /
ಹೊದ್ಯಲ್ಲ ಈ ಜೀವದಿಂದ / ನಿ / ಹೊದ್ಯಲ್ಲ ಈ ಜೀವದಿಂದ
ಇಂತಿ ನಿಮ್ಮ ಪ್ರೀತಿಯ
ರಾದೇ....ಕಾರಭಾರಿ

No comments:
Post a Comment