ನಾ ಹೆಣವಾಗುವ ಮುನ್ನ
ನನ್ನ ಮನದಾಳದಿಂದ ಮೂಡಿದ
ವೇದನೆಯ ಹಾಡು
ಪಾಪವ ಮಾಡಿದ ಮನುಜನು ನಾನು ಮನ್ನಿಸೋ ದೇವಾ //
//ನನ್ನ // ಮನ್ನಿಸೋ ದೇವ . ನಿ...ನನ್ನ ಮನ್ನಿಸೋ ದೇವಾ //ಪ//
ಯಾವ ಜನ್ಮದ ಪಾಪದ ಪಲವೋ....../2/ ಅ...ನಾಥ..ನಾದೆ ನಾನ
ಈ ಜನುಮದಿ ದಿಕ್ಕಿಲ್ಲದವನಾದೆ ನಾನ
//ಪಾಪವ ಮಾಡಿದ ಮನುಜನು//
ಅಮ್ಮನ ಮಡಿಲಲ್ಲಿ ಮಗುವಾಗೋ ಆಸೆ / ಅಮ್ಮನ ಕೊನೆತುತ್ತ ತಿಂದು ಸಾಯೋ ಆಸೆ
/ಕರುಣಿಸೋ ದೇವಾ/
ನನ್ನ ಕರುಣಿಸೋ ದೇವಾ // ನಿ ನನ್ನ ಕರುಣಿಸೋ ದೇವ
//ಪಾಪವ ಮಾಡಿದ ಮನುಜನು//
ಅಪ್ಪನ ಭುಜಕೆ ಭುಜವಾಗೋ ಆಸೆ / ಅಪ್ಪನ ಅಪ್ಪಿಕೊಂಡು ಬದುಕೊವಾಸೆ
/ಅಪ್ಪನಾಗೋ ದೇವಾ/
ನನ್ನ ಅಪ್ಪನಾಗೋ ದೇವ // ನಿ ನನ್ನ ಅಪ್ಪನಾಗೋ ದೇವ
//ಪಾಪವ ಮಾಡಿದ ಮನುಜನು//
ಮುದ್ದಿನ ತಂಗಿಗೆ ಅಣ್ಣನಾಗೋ ಆಸೆ / ನಲ್ಮೆಯ ತಮ್ಮನ ಬಲವಾಗೋ ಆಸೆ
/ಕರುಣಿಸೋ ದೇವಾ/
ನನ್ನ ಕರುಣಿಸೋ ದೇವಾ // ನಿ ನನ್ನ ಕರುಣಿಸೋ ದೇವ
//ಪಾಪವ ಮಾಡಿದ ಮನುಜನು//
ಮಡದಿಯ ಪ್ರೀತಿಯಲ್ಲಿ ತೆಲಾಡೋ ಆಸೆ // ಮಕ್ಕಳ ಜೊತೆಗೂಡಿ ಆಟವಾಡೋ ಆಸೆ
/ಕರುಣಿಸೋ ದೇವಾ/
ನನ್ನ ಕರುಣಿಸೋ ದೇವಾ // ನಿ ನನ್ನ ಕರುಣಿಸೋ ದೇವ
//ಪಾಪವ ಮಾಡಿದ ಮನುಜನು//
ರಾ ದೇ ಕಾರಭಾರಿ













